ಪರಮ್‌ಜೀತ್ ಖುರಾನಾ ರವರು(೧೫ ಆಗಸ್ಟ್ ೧೯೫೬) ಮಾಲಿಕ್ಯುಲರ್ ಬಯೋಲಜಿ, ಜೀನೋಮಿಕ್ಸ್, ಪ್ಲಾಂಟ್ ಬಯೋಟೆಕ್ನಾಲಜಿ ನಲ್ಲಿನ ಭಾರತದ ವಿಜ್ಞಾನಿ.. ಅವರು ಪ್ರಸ್ತುತವಾಗಿ ದೆಹಲಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಪ್ಲಾಂಟ್ ಮಾಲಿಕ್ಯುಲರ್ ಬಯೋಲಜಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಖುರಾನ ರವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಹಾಗೂ ೧೨೫ ಕ್ಕೂ ಹೆಚ್ಚು ವೈಜ್ಞಾನಿಕ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. == ಜನನ == ಪರಮ್‌ಜೀತ್ ಖುರಾನಾ ರವರು ೧೫ ಆಗಸ್ಟ್ ೧೯೫೬ ರಂದು ಜನಿಸಿದರು. == ಶಿಕ್ಷಣ == ಪರಮ್‌ಜೀತ್ ರವರು ದೆಹಲಿ ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ೧೯೭೫ ರಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ. ೧೯೭೭ ರಲ್ಲಿ ಮಾಸ್ಟರ್ ಆಪ್ ಸೈನ್ಸ್ ಪದವಿ. ೧೯೭೮ ರಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿ. ೧೯೮೩ ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ (ಪಿ.ಎಚ್.ಡಿ)ಡಾಕ್ಟೋರಲ್ ಪದವಿ. == ವೃತ್ತಿಜೀವನ == ಖುರಾನ ರವರು ಯುನಿಟ್ ಫಾರ್ ಪ್ಲಾಟ್ ಸೆಲ್ ಮತ್ತು ಮಾಲಿಕ್ಯುಲರ್ ಬಯೋಲಜಿ ಘಟಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ೧೯೮೪ ರಿಂದ ೧೯೮೭ ರವರೆಗೆ ಇವರು ದೆಹಲಿಯ ಎಸ್.ಜಿ.ಟಿ.ಬಿ. ಖಲ್ಸಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು. ೧೯೮೭ ರಿಂದ ೧೯೮೮ ರ ತನಕ ಇವರು ಮಿಚಿಗನ್ ಸ್ಟೇಟ್ ಯುನಿವರ್ಸಿಟಿ (ಎಮ್ಎಸ್ಯು) ಲ್ಯಾನ್ಸಿಂಗ್ ನಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಿದರು. ಪ್ರೊಫೆಸರ್ ಆಗಿ ಇವರು ೧೦ ಪೋಸ್ಟ್ ಡಾಕ್ಟೋರೇಟ್ಸ್ , ೧೫ ಪಿ.ಎಚ್.ಡಿ. ವಿದ್ವಾಂಸರು , ೪ ಎಮ್.ಫಿಲ್. ಮತ್ತು ೨೦ ಮಾಸ್ಟರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ. == ಪ್ರಶಸ್ತಿಗಳು == ಗಂತವ್ಯ ಸಂಸ್ಥಾನದಿಂದ 'ಗೌರವ ಪ್ರಮಾಣಪತ್ರ'ವನ್ನು ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆಯಂದು ನೀಡಲಾಯಿತು - ೨೦೧೧. ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ ನ ಪ್ರೊಫೆಸರ್ ಅರ್ಚನಾ ಶರ್ಮ ಸ್ಮಾರಕ ಪ್ರಶಸ್ತಿ - ೨೦೧೧-೨೦೧೨. ಶ್ರೀ ರಂಜನ್ ಮೆಮೋರಿಯಲ್ ಲೆಕ್ಚರ್ ಅವಾರ್ಡ್ - ೨೦೧೪. == ಪ್ರಕಟಣೆಗಳು == ಖುರಾನ ರವರ ೧೨೫ ಪ್ರಕಾಶನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಲಾಗಿದೆ. === ಗಮನಾರ್ಹ ಕೆಲಸ === ಗೋಧಿ ಮತ್ತು ಸೆರಿಬಯೋಟೆಕ್ನಾಲಜಿ ನಲ್ಲಿನ ಸಂಶೋಧನೆಗೆ ಇವರು ಗಮನಾರ್ಹರಾಗಿದ್ದಾರೆ. == ಫೆಲೋಶಿಪ್ಸ್ == ಫೆಲೋ ಆಫ್ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ - ೨೦೧೦. ಫೆಲೋ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ - ೨೦೦೩. ಫೆಲೋ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ - ೨೦೧೪. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಪ್ರೊಫೆಸರ್ ಜೆ.ಸಿ.ಬೋಸ್ ಫೆಲೋಶಿಪ್ - ೨೦೧೨-೨೦೧೭. == ಉಲ್ಲೇಖಗಳು ==